ಹಾಯ್ ಬೆಂಗಳೂರು

ಆಧುನೀಕರಣ ಎಂಬ ಹೊದಿಕೆಯಿಂದ ನಮ್ಮ ಹಳ್ಳಿಗಳೆಲ್ಲ ಇಂದು ನಗರಗಳಾಗುವತ್ತ ಹೆಜ್ಜೆ ಇಟ್ಟಿವೆ. ನಾನು ಬಾಲ್ಯವನ್ನು ಕಳೆದಿದ್ದು ಕುಂಬಾರವಾಡ ಎಂಬ ಪುಟ್ಟ ಮಾದರಿ ಹಳ್ಳಿಯಲ್ಲಿ. ಆಗಿನ ಕಾಲದಲ್ಲಿ ಅಂದರೆ 90 ರ ದಶಕದಲ್ಲಿ ನಮಗೆ ಮೂಲಭೂತ ಸೌಕರ್ಯಗಳಿಗೇನೂ ಕಡಿಮೆ ಇರಲಿಲ್ಲ. ಆದರೆ ಆದುನಿಕ ತಂತ್ರಜ್ಞಾನಗಳು ತಲುಪಲು ಕೆಲವು ವರ್ಷಗಳೇ ಬೇಕಾಗಿತ್ತು. ಬೇಸಿಗೆ ರಜೆಗೆ ಊರಿಗೆ ಹೋದಾಗ ನಮ್ಮ ವಯಸ್ಸಿನ ಮಕ್ಕಳು WWF, ಟಾಮ್ & ಜೆರ್ರೀ, ಸೋನೀ ಟೀವೀ , ಸೀ ಐ ಡೀ , ಫ್ಯಾಶನ್ ಟೀವೀ…

2013 ರಾಂಗ್ ಟರ್ನ್ – ಯಾರೂ ನಡೆಯದ ದಾರಿ

ಕಾಡ್ ಬಾಯ್ಸ್ : ಒಂಬತ್ತು ಗುಡ್ಡದ ಸಾಹಸದ ನಂತರ ಹೇಳಿಕೊಳ್ಳಲು ನಾವು ಸಾಹಸಿ ಚಾರಣಿಗರಾಗಿದ್ದೆವು. ಒಂದಲ್ಲ ಎರಡಲ್ಲ ಸಮಯ ಸಿಕ್ಕಾಗಲೆಲ್ಲ ಹೊಸ ಹೊಸ ಹುಡುಗರನ್ನು ಸೇರಿಸಿಕೊಂಡು ಕಾಲೇಜಿನಿಂದ ಚಾರಣ ಹೊರಡುತ್ತಿದ್ದೆವು. ಅದೇ ಹಳೆಯ ಚಾಳಿ. ಮೆಜೆಸ್ಟಿಕ್ ಪ್ಲಾಟಫಾರ್ಮ್ ಭೇಟಿಯ ನಂತರ ಸಿಂಹ ಎಲ್ಲಿ ಹೋಗಬೇಕು ಎನ್ನುವುದನ್ನು ಹೇಳುತ್ತಿದ್ದ. ಮತ್ತೆ ಅದೇ ಬಾಡಿಗೆಯ ಟೆಂಟುಗಳು , ಚಪಾತಿ / ಜೋಳದ ರೊಟ್ಟಿಯೊಂದಿಗೆ ಚಟ್ನಿ ಪುಡಿ , ಮ್ಯಾಗ್ಗಿ, ಒಂದು ಚಹಾ ಮಾಡುವ ಪಾತ್ರೆ , ಸಿಂಹನ ಡೊಮೇಕ್ಸ್ ಬಾತ್ರೂಮ್…

“ಕಾಟ್ ರಬ್ಬರ್” – ಪ್ರಾಥಮಿಕ ಶಾಲೆಯ ಪ್ರಾರ್ಥನೆ ಸಾಲಿನಿಂದ…

ಇದು ಕಥೆಯಲ್ಲ. ಒಂದು ಬಾಲ್ಯದ ಸನ್ನಿವೇಶ. ಮುಗುಳುನಗೆ ತರಿಸಿದ ಒಂದು ಪುಟ್ಟ ಘಟನೆ. ಇಂದು ಯಾವುದೋ ಹಳೆಯ ಬ್ಯಾಗ್ ಹುಡುಕುವಾಗ ಒಂದು ಬಣ್ಣ ಮಾಸಿದ ಪೆನ್ಸಿಲ್ ಬರಹ ಅಳಿಸುವ ರಬ್ಬರ್ ಸಿಕ್ಕಾಗ ಅದೇ ಹಳೆಯ ಕಾಟ್ ರಬ್ಬರ್ ಸನ್ನಿವೇಶ ನೆನಪಾಯಿತು. ಮತ್ತೆ ಮತ್ತೆ ಹೇಳುವಂತೆ ನಮ್ಮದು ಹಳ್ಳಿಯ ಒಂದು ಶಾಲೆ. ಇಮ್ಯಾಜಿನ್ ಮಾಡ್ಕೊಳಿ. ಈ ಟಿಪಿಕಲ್ ಮಲಯಾಳಂ ಸಿನೆಮಾಗಳಲ್ಲಿ ತೋರಿಸುವಂಥ ಹಸಿರು ತುಂಬಿರುವ ದಟ್ಟ ಕಾಡುಗಳಿಂದ ಸುತ್ತುವರೆದ ಒಂದು ಪುಟ್ಟ ಊರು.  ಸುಮಾರು  20 ವರ್ಷಗಳ ಹಿಂದೆ…

ಕಾಲಚಕ್ರ

ಕಳೆದ ಕಾಲ ಮರಳಿ ಬರಲಿಬಂದು ನಿನ್ನ ಮಾತು ಮುಗಿಸಿಮತ್ತೆ ರಾತ್ರಿಯಾಗಲಿ….!! ಬೆಳಕು ಹರಿದ ಇರುಳ ಕೊನೆಗೆನನ್ನ ಎದೆಗೆ ನೀನು ಒರಗಿಕಣ್ಣ ತೆರೆದು ನನ್ನ ಗಮನಿಸಲುನಾನು ಕಳೆದ ಕಾಲವ ಮತ್ತೆ ಕರೆಯುವೆ.

ನಥಾಲಿಯಾ – ನೀಲಿ ಕಂಗಳ ಗೆಳತಿಯ ಕಥೆ

ಒಂದು ನೈಜ ಘಟನೆ ಹೇಳ್ತಿನಿ….. ಇದು ನೀಲಿ ಕಂಗಳ ಗೆಳತಿಯ ಕಥೆ ಹಾಗೆ ಸೌಮ್ಯಕ್ಕ ಳ  ಬ್ಲಾಗ್ ನಲ್ಲಿ ಬರುವ ನೀಲಿ ಕಂಗಳ ಹುಡುಗನ ಪಾತ್ರ ನೆನಪಾಗಿ – ನನ್ನ ಜೀವನದಲ್ಲಿ ಆಕಸ್ಮಿಕವಾಗಿ ಬಂದು ಸ್ನೇಹವೆಂಬ ಹೆಸರಿಗೆ ಅರ್ಥ ನೀಡಿದ ನೀಲಿ ಕಣ್ಣಿನ ವಿದೇಶಿ ಮಹಿಳೆಯ ಬಗ್ಗೆ ಬರೆಯೋಣ ಅನಿಸಿತು. ಮೊನ್ನೆ ರಷ್ಯಾ ದಿಂದ ಗೆಳತಿಯೊಬ್ಬಳು ವಾಟ್ಸಪ್ಪ್ ನಲ್ಲಿ ಮಗುವಿನ ಫೋಟೋ ಕಳಿಸಿದ್ದಳು. ಮಗುವಿನ ಹೆಸರು ಎಲಿಝವೆತ ಅಂತ ಇನ್ನು ಒಂದು ವರ್ಷ ತುಂಬಿಲ್ಲ ಅನಿಸುತ್ತೆ. ಮುಂದಿನ…

Goa calling??? Here is your Handbook

ITINERARIES: OPtion1: 2N3D-MAJESTIC DUDHSAGAR Day 1: pick up from bus stop and drop to Hotel after noon: Fort aguad, dolphin watch evening Cruise and drop to Hotel. Day 2: Dudhsagar with Spice garden night u can spend time in beach Day 3: after check out panjim/airport drop Option2:2N3D-DUDHSAGAR ADVENTURE Day1: Pick up from busstop and…

“ಅಲೆಮಾರಿಗಳ ಜಗತ್ತಿನಲ್ಲಿ ಅಪರಿಚಿತರು ಯಾರು?” V2.0

ಬರಹ ಅನ್ನೋದು ಒಂದು ಗೀಳು ನನಗೂ ಆಗಿದ್ದರೆ ಇಷ್ಟೋತ್ತಿಗೆ ಎಷ್ಟೋ ಪುಸ್ತಕಗಳನ್ನು ಬರೆದಿರುತ್ತಿದ್ದೆ ಏನೋ ಎಂದುಕೊಂಡು ಚಹಾ ದ ಇನ್ನೊಂದು ಸಿಪ್ ಕುಡಿದಾಗ ರಾತ್ರಿ ೧ ಘಂಟೆ. ಅದ್ಯಾಕೋ ಕಳೆದ ಏಪ್ರಿಲ್ ನಲ್ಲಿ ಮಾಡಿದ ತವಾಂಗ್ ಬೈಕ್ ರೈಡ್ ನೆನಪಾಗಿ “ಅಯ್ಯೋ ಇದನ್ನು ಡಾಕ್ಯುಮೆಂಟ್ ಮಾಡಿ ಬರೆದಿದ್ದರೆ ನನ್ನ ಅಲೆಮಾರಿಗಳ ಜಗತ್ತಿನಲ್ಲಿ…… ಮುಂದುವರೆಸಬಹುದಿತ್ತಲ್ಲ” ಎಂದು ನಿದ್ದೆಯಿಂದ ಎದ್ದು ಟೈಪ್ ಮಾಡಲು ಕುಳಿತಾಗ ಬರವಣಿಗೆಯಿಂದ ದೂರ , ನನ್ನ ಪಯಣಗಳನ್ನು ಕೆಲವು ದಿನಗಳಿಗೆ ಮ್ಯೂಟ್ ಮಾಡಿ ಈ ವರ್ತಮಾನ…

ಆಗುಂಬೆ ಅಕ್ಕ-ಪಕ್ಕ

ಯಾವಾಗ ?: ಜೂನ್ ೧೯ ೨೦೧೯ ಅಯ್ಯೋ ಮತ್ತೆ ಅದೇ ಹಳೆಯ ಚಟ….!! ರಾತ್ರಿ ೧೦ ಘಂಟೆ, ಮೆಜೆಸ್ಟಿಕ್ ನ ಚಿಕ್ಕಮಗಳೂರು ಬಸ್ ಪ್ಲಾಟ್ಫಾರ್ಮ್ . ಮುಂಚೆ ಮೆಟ್ರೋ ಇರಲಿಲ್ಲ , ಈಗ ಮೆಟ್ರೋ ಕ್ಷಣಾರ್ಧದಲ್ಲಿ ನೇರವಾಗಿ ಮೆಜೆಸ್ಟಿಕ್ ತಲುಪಿಸತ್ತೆ.  ಸಿಂಹ ಮುಂಚಿತವಾಗಿ ಅಲ್ಲಿ ಹೋಗಿ ಕಾಯುತ್ತಿದ್ದ. ಈ ಸನ್ನಿವೇಶ ಸಾಕು ನಮ್ಮ ಇಂಜಿನಿಯರಿಂಗ್ ದಿನಗಳನ್ನು ಮೆಲುಕು ಹಾಕಲು .. ನಮ್ಮ ಟ್ರೆಕಿಂಗ್ ಪ್ರಯಾಣಗಳು ಶುರುವಾಗಿದ್ದು ಹೀಗೆ ಅಲ್ಲವೇ ? ಗುರುತಿರದ ಜಾಗ , ಮೆಜೆಸ್ಟಿಕ್ ನ…

ಒಂಬತ್ತು ಗುಡ್ಡ : ಕಾಡ್ ಬಾಯ್ಸ್ ಡೈರೀಸ್

ಕಿರಿಕ್ ಪಾರ್ಟೀ ಸಿನಿಮಾ  ನೋಡುವಾಗ ಬರೀ ಇಂಜಿನಿಯರಿಂಗ್ ಕಾಲೇಜ್ ದಿನಗಳದೆ ನೆನಪು. ವಿಪರ್ಯಾಸವೆಂದರೆ ನಮಗೆ ಎಲ್ಲಕ್ಕಿಂತ ಹೆಚ್ಚಾಗಿ ಆಕರ್ಷಿಸಿದ್ದು ಅಂದರೆ ಚಾರಣ. ನಾವು ಏನಾದರೂ ಈ ಸಿನಿಮಾ ಮಾಡಿದ್ದಾರೆ ಸೆಮಿಸ್ಟೆರ್ ಗೆ ಕನಿಷ್ಟ ಒಂದಾದರೂ ಚಾರಣ ಮಾಡಿಸಿ, ನಮ್ಮ ಪಶ್ಚಿಮ ಗಟ್ಟದ ಅಂದ ಕಣ್ಣಿನಲ್ಲಿ ಹೆಪ್ಪುಗಟ್ಟುವ ತನಕ ತೋರಿಸ ಬಹುದಿತ್ತು ಅಂದುಕೊಂಡೆ. ಪಶ್ಚಿಮ ಘಟ್ಟದಲ್ಲೇ ಹುಟ್ಟಿ ಬೆಳೆದಿದ್ದರೂ, ಕಾಡು ಮೇಡುಗಳನ್ನು ಸುತ್ತಿ ಕಣ್ಣಾ ಮುಚ್ಚಾಲೆ ಆಡಿದ್ದರೂ, ಕಾಡು-ಬೆಟ್ಟ ಅಳೆಯುವುದನ್ನೇ ಚಾರಣ ಎನ್ನುತ್ತಾರೆ ಎಂದು ತಿಳಿದಿದ್ದು ಎರಡನೆಯ ಸೆಮಿಸ್ಟೆರ್…

ಅಲೆಮಾರಿಗಳ ಜಗತ್ತಿನಲ್ಲಿ ಅಪರಿಚಿತರು ಯಾರು?(ಭಾಗ 17)

ಬೆಳಿಗ್ಗೆ ಎದ್ದು ಹೊರಟಾಗ ಮಳೆ ಜಿನುಗುಡುತ್ತಿತ್ತು. ಮಳೆಯ ಮಂಜಿಗೆ ಮನಾಲಿ ಮಾಯಾನಗರದಂತೆ ಮಿಂಚುತ್ತಿತ್ತು. ಬೀಸ್ ನದಿಯ ದಡದ ಮೇಲೆ ಹೊರಟು ಕುಲು ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ. ಕುಲುವಿನ ಘಾಟಿನಲ್ಲಿರುವ ಹೋಟೆಲ್ ಒಂದರಲ್ಲಿ ಪರೋಟ ಹಾಗು ದಹಿ ತಿಂದಾಗ ಹಸಿವು ತಣ್ಣಗಾಯಿತು. ತಡಮಾಡದೆ ಅಲ್ಲಿಂದ ಹೊರಟು ಮಧ್ಯಾಹ್ನ ಚಂಡೀಗಡ್ ಸೇರಿದಾಗ ೩ ಘಂಟೆ. ಹೈ ವೆ ಪಕ್ಕದ ಹೋಟೆಲ್ ನಲ್ಲಿ ಊಟ ಮುಗಿಸಿ ನೇರವಾಗಿ ದೆಹಲಿಯ ರಸ್ತೆ ಹಿಡಿಯುವ ಮುನ್ನ ಕರೋಲ್ ಬಾಗ್ ನಲ್ಲಿ ಒಂದು ಅರಿಹಂತ್ ಇನ್…