“ಕಾಟ್ ರಬ್ಬರ್” – ಪ್ರಾಥಮಿಕ ಶಾಲೆಯ ಪ್ರಾರ್ಥನೆ ಸಾಲಿನಿಂದ…

ಇದು ಕಥೆಯಲ್ಲ. ಒಂದು ಬಾಲ್ಯದ ಸನ್ನಿವೇಶ. ಮುಗುಳುನಗೆ ತರಿಸಿದ ಒಂದು ಪುಟ್ಟ ಘಟನೆ.

ಇಂದು ಯಾವುದೋ ಹಳೆಯ ಬ್ಯಾಗ್ ಹುಡುಕುವಾಗ ಒಂದು ಬಣ್ಣ ಮಾಸಿದ ಪೆನ್ಸಿಲ್ ಬರಹ ಅಳಿಸುವ ರಬ್ಬರ್ ಸಿಕ್ಕಾಗ ಅದೇ ಹಳೆಯ ಕಾಟ್ ರಬ್ಬರ್ ಸನ್ನಿವೇಶ ನೆನಪಾಯಿತು.

ಮತ್ತೆ ಮತ್ತೆ ಹೇಳುವಂತೆ ನಮ್ಮದು ಹಳ್ಳಿಯ ಒಂದು ಶಾಲೆ. ಇಮ್ಯಾಜಿನ್ ಮಾಡ್ಕೊಳಿ.

ಈ ಟಿಪಿಕಲ್ ಮಲಯಾಳಂ ಸಿನೆಮಾಗಳಲ್ಲಿ ತೋರಿಸುವಂಥ ಹಸಿರು ತುಂಬಿರುವ ದಟ್ಟ ಕಾಡುಗಳಿಂದ ಸುತ್ತುವರೆದ ಒಂದು ಪುಟ್ಟ ಊರು.  ಸುಮಾರು  20 ವರ್ಷಗಳ ಹಿಂದೆ ಮಳೆಗಾಲದ ಒಂದು ಶುಕ್ರವಾರ ನಾನು ಮತ್ತು ನನ್ನ ಗೆಳೆಯ ಜೊಸೆಫ್, ಕ್ಲಾಸ್ ನಲ್ಲಿ ಖಾಲಿ ಹಾಳೆಯ ಮೇಲೆ “ಸ್ಟಾಪ್” ಎನ್ನುವ ಆಟ ಆಡುತ್ತಿದ್ದೆವು.

ಕಾಂಟೆಕ್ಸ್ಟ್ ಇಂದ ಆಚೆ   ಹೋಗಲೇಬೇಕು ಇವಾಗ.

ಈ ಆಟದ ಬಗ್ಗೆ ಸ್ವಲ್ಪ ವಿವರಣೆ ?

ಯಾರು ಕಂಡು ಹಿಡಿದರು ಎಂಬ ಅರಿವಿಲ್ಲ. 0-1-2 ಅಂಕೆ ಯನ್ನು ಉಪಯೋಗಿಸಿ ಎಲ್ಲ ಅಂಕೆಗಳನ್ನು ಬರೆದುಕೊಳ್ಳುವುದು.

ಪ್ರತಿಯೊಂದಕ್ಕೂ ಒಂದೊಂದು ಭವಿಷ್ಯ.

ಉದಾಹರಣೆ :

೦೦೦: ಅವಳು ನಿನ್ನನ್ನು ಪ್ರೀತಿಸುತ್ತಾಳೆ.

೦೦೧:  ಅವಳು ನಿನ್ನನ್ನು ಮದುವೆಯಾಗುವಳು.

೦೧೧: ……..

 ಹೀಗೆ ಏನೇನೋ ಹುಚ್ಚು ಬರಹಗಳು

ಈ ಬರಹಗಳ ಒಂದು ಪಟ್ಟಿ ಇರುತ್ತಿತ್ತು. ಅದನ್ನೇ ಯಾರಾದರೂ ಕಾಪಿ ಮಾಡಬಹುದಿತ್ತು ಇಲ್ಲವಾದಲ್ಲಿ ತಮ್ಮದೇ ಹೊಸ ವರ್ಷನ್ ಮಾಡಬಹುದಿತ್ತು.

ಎಲ್ಲ ಆದಮೇಲೆ ಆಟ ಶುರು.

ಆಟಗಾರ ಕಣ್ಣು ಮುಚ್ಚಿ ಯಾರನ್ನಾದರೂ ನೆನೆಸಿಕೊಂಡು

ಸ್ಟಾರ್ಟ್ ಅನ್ನ ಬೇಕು.

ಇನ್ನೊಬ್ಬ ಹಳೆಯ ಮೇಲೆ ಸಾಲಿನಲ್ಲಿ ||||||||||| ಎಂಬಂತೆ ಗೀಟು ಎಳೆಯುತ್ತಿರಲು ಆಟಗಾರ ಸ್ಟಾಪ್ ಎಂದಾಗ ನಿಲ್ಲಿಸಿ ಎಳೆದ ಗೀಟುಗಳ 3 ರ ಗುಂಪಾಗಿ ವಿಂಗಡಿಸಿ ಉಳಿದ ಸಂಖ್ಯೆ ಬರೆದುಕೊಳ್ಳಬೇಕು.

ಇದನ್ನೇ ಮೂರು ಬಾರಿ ಪುನರಾವರ್ತಿಸಿದಾಗ  3 ಅಂಕೆಯ ಒಂದು ಸಂಖ್ಯೆ ಸಿಗುತ್ತದೆ.

ಆ ಸಂಖ್ಯೆಯ ಭವಿಷ್ಯ ನೋಡುವುದೇ ಆಟದ ಗಮ್ಮತ್ತು.

ಜೋಸೆಫ್ ಹೇಳಿದ :

ಹೇ ನಿಂಗೊತ್ತಾ ? ಸಂಧ್ಯಾ ಪೆನ್ಸಿಲ್ ಶಾರ್ಪ್ ಮಾಡಿದ ಕಟ್ಟಿಗೆಯ ಚೂರುಗಳಿಂದ ರಬ್ಬರ್ ಮಾಡಿಕೊಡುತ್ತಾಳೆ ಅಂತೆ.

ನನಗೆ ಅದು ವಿಚಿತ್ರ  ಅನಿಸಲಿಲ್ಲ. ಮಾರನೆಯ ದಿನ ಹೋಗಿ ಅವಳಿಗೆ ಕೇಳಿದಾಗ ಅವಳು ರೆಸಿಪಿ ಹೇಳಿದಳು.

ಪೆನ್ಸಿಲ್ ಕಟ್ಟಿಗೆಯ ಪುಡಿಗೆ ಯಾವುದೊ ಗಿಡದ ರಸ  ಹಾಕಿ ಚೆನ್ನಾಗಿ ಅರಿದು ಕಾಜು ಬರ್ಫಿ ಅಂತೇ ಜೋಡಿಸಿದಾಗ ರಬ್ಬರ್ ಆಗುತ್ತದೆಯಂತೆ . ರಸ್ಸ ಯಾವುದು ಎಂಬ ರಹಸ್ಯ  ಬಿಟ್ಟು ಕೊಡಲಿಲ್ಲ ಆಕೆ.

ಇರಬಹುದು ಅನ್ನಿಸಿ ನಾನು  ತಡ ಮಾಡಲಿಲ್ಲ. ಒಂದು ಚೂಪನೆಯ ಪೆನ್ಸಿಲ್ ನ ಕೆತ್ತು  ಕೆತ್ತು ಅವಳಿಗೆ ಕೊಟ್ಟೆ ಬಿಟ್ಟೆ . ಸೋಮವಾರ ಬರುವಾಗ ರಬ್ಬರ್ ಮಾಡಿಕೊಂಡು ಬಾ ಎಂದು.

ಅದೇ ದಿನ ಯಾರೋ  ಹುಡುಗರು ಕಿರುಬೆರಳಿನ ಗಾತ್ರದ ಹೊಳೆಯುವ ಹಸಿರು ಬಣ್ಣದ ರೇಡಿಯಂ ಹುಳು  ಹಿಡಿದು ತಂದು ಕೊಟ್ಟಿದ್ದರು . ನಮ್ಮ ರತ್ನಾಕರ್ ಸರ್ – ಇದನ್ನು ಮನೆಯಲ್ಲಿ ಸರಿಯಾಗಿ ಇಟ್ಟು ಸೋಮವಾರ ತರುವಂತೆ ನನಗೆ ಹೇಳಿದರು.

ಸೋಮವಾರ :

ಸಂಧ್ಯಾ  ಶಾಲೆಗೆ ಬರಲಿಲ್ಲ.

ಹಸಿರು ಹುಳು ಕಳೆದು ಹೋಗಿತ್ತು. ಅದ್ರಷ್ಟವಶಾತ್ ನಮ್ಮ ರತ್ನಾಕರ್ ಮಾಸ್ಟರ್ ರಿಗೂ ಅದು ನೆನಪಾಗಲಿಲ್ಲ.

ಮಂಗಳವಾರ :

ಸಂಧ್ಯಾ ಬಂದು ಬೆಳ್ಳನೆಯ ಹೊಸ ರಬ್ಬರ್ ಕೊಟ್ಟಳು. ನಟರಾಜ ಎಂದು ಬರೆದಿತ್ತೇನೋ – ನೆನಪಿಲ್ಲ.

ಇದು ಹಾಗೆ ತಿಂಗಳುಗಳ ಕಾಲ  ಮುಂದುವರೆಯಿತು.

ಪ್ರತಿ ಬಾರಿ ಅವಳು ಅಂಗಡಿಯಿಂದ ಹೊಸ ರಬ್ಬರ್ ತಂದು ಕೊಡುತ್ತಿದ್ದಳು ಎಂಬ ಸತ್ಯ ತಿಳಿಯಲು ಆದೆಷ್ಟೋ ವರ್ಷಗಳು ಬೇಕಾಯಿತು.

ಹೀಗೆ ರಬ್ಬರ್ ನೋಡಿದಾಗ – ಕ್ಲಾಸ್  ನ  ಹುಡುಗಿ ಕಣ್ಮುಂದೆ ಬರುತ್ತಾಳೆ

.

ನಂಬಿದ್ದು ಮುಗ್ಧತೆಯೋ ಮೌಡ್ಯತೆಯೋ ಎಂಬ ಗೊಂದಲ ದಲ್ಲಿ ಕೆಲವೊಮ್ಮೆ ವಿಜ್ಞಾನ ಅರ್ಥ ಕಳೆದುಕೂಂಡು ಮುಗುಳುನಗೆ ಆಗುತ್ತದೆ.

  ಈ ಕತೆಯನ್ನ ನಿನ್ನೆ ಮೊನ್ನೆ ನಮ್ಮ ಸಿಂಹನಿಗೆ ಹೇಳಿದಾಗ- ಅವರ ಸ್ಕೂಲ್ ಬೆಂಗಳೂರಿನಲ್ಲೂ ಇದೇ ರೀತಿಯ ಊಹಾಪೋಹ ಒಮ್ಮೆ ಇತ್ತಂತೆ. ಅದ್ಯಾವ ಸಂವಹನ ದಿಂದ ನಮ್ಮ ಕುಗ್ರಾಮದ ಸಂಧ್ಯಾಳನ್ನು ತಲುಪಿತ್ತು ಎಂಬುದು ಅವಳೇ ಹೇಳಬೇಕು.

ಈ ತರಹದ ಅಥವಾ ಇಂದು ನಗೆ ತರಿಸುವ ಶಾಲೆಯ ನೆನಪುಗಳು ನಿಮ್ಮಲ್ಲಿದ್ದಲ್ಲಿ ಹಂಚಿಕೊಳ್ಳಿ.

One Comment Add yours

  1. Tarana Shetty says:

    Beautifully written!! Feeling nostalgic. 😌

Leave a comment